Congress slogan shouting during PM Modi's speech was Rahul Gandhi's idea. Congress president Rahul came up with the idea of protest based on "guerrilla-style" war technique, sources.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಪ್ರಧಾನಿ ಮೋದಿ ಬುಧವಾರ (ಫೆ 7) ಮಾಡಿದ ಸುಮಾರು 90 ನಿಮಿಷದ ಭಾಷಣದುದ್ದಕ್ಕೂ, ಕಾಂಗ್ರೆಸ್ ಪಕ್ಷದ ಸದಸ್ಯರು ಘೋಷಣೆ ಕೂಗುತ್ತಲೇ ಇದ್ದರು. ಆದರೆ, ಬಿಟ್ಟಾರಾ ಮೋದಿ? ಕಾಂಗ್ರೆಸ್ಸಿಗರ ಕೂಗಾಟದಿಂದ ಪ್ರಧಾನಿ ಭಾಷಣ ಇನ್ನಷ್ಟು ತೀಕ್ಷ್ನತೆ ಪಡೆಯಿತೇ ಹೊರತು, ಮೋದಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲೇ ಇಲ್ಲ.. ಈ ಮಧ್ಯೆ, ಪ್ರಧಾನಿ ಮೋದಿ ಭಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷದ ಅಡ್ಡಿಯ ಹಿಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ತಂತ್ರಗಾರಿಕೆ ಇದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಗೆರಿಲ್ಲಾ ಸ್ಟೈಲ್ ತಂತ್ರಗಾರಿಕೆ ಇದು ಎಂದು ಪತ್ರಿಕೆ ಹೇಳಿದೆ.